ಉಪೇಂದ್ರ ಅವರಿಂದ ಪ್ರಜಾಕೀಯ ಪ್ರಣಾಳಿಕೆ | Oneindia Kannada

2018-01-16 126

ಉಪೇಂದ್ರ ಅವರು ಪ್ರತ್ಯೇಕ ರಾಜಕೀಯ ಪಕ್ಷವೊಂದನ್ನು ಘೋಷಿಸಿ ತಿಂಗಳುಗಳೇ ಕಳೆದಿವೆ . ಉಪೇಂದ್ರ ಅವರ ರಾಜಕೀಯ ಪ್ರವೇಶದ ಬಗ್ಗೆ ಇಡೀ ರಾಜ್ಯದಲ್ಲಿ ಚರ್ಚೆಗಳು ಶುರು ಆದವು . ಉಪೇಂದ್ರ ಅವರ ಈ ಹೊಸ ಆರಂಭಕ್ಕೆ ಮಿಶ್ರ ಪ್ರತಿಕ್ರಿಯೆಗಳು ಕೇಳಿ ಬಂದವು . ಆದರೆ ಉಪೇಂದ್ರ ಮಾತ್ರ ಇವ್ಯಾವುದಕ್ಕೂ ಕಿವಿ ಕೊಡದೆ ಚುನಾವಣೆಗೆ ತಯಾರಾಗುವುದರಲ್ಲಿ ತಲ್ಲೀನರಾದರು .

ಈಗೊಮ್ಮೆ ಆಗೊಮ್ಮೆ ಟಿವಿಯಲ್ಲಿ ಕಾಣಿಸಿಕೊಂಡು , ತನ್ನ ಪಕ್ಷದ ದ್ಯೇಯಗಳನ್ನು ವೀಕ್ಷಕರಿಗೆ ಹಾಗು ಈ ರಾಜ್ಯದ ಪ್ರಜೆಗಳಿಗೆ ತಿಳಿಸಿ ಕೊಟ್ಟರು .

ಇತ್ತೀಚಿಗೆ ಮಾಧ್ಯಮದವರನ್ನು ಕರೆದು ತಮ್ಮ ಪಕ್ಷದ ಚಿಹ್ನೆಯನ್ನು ಬಹಿರಂಗ ಪಡಿಸಿದರು . ಆಟೋವನ್ನು ತಮ್ಮ ಪಕ್ಷದ ಚಿಹ್ನೆಯನ್ನಾಗಿ ಇಟ್ಟಿರುವ ಉಪೇಂದ್ರ ಅವರು " ಆಟೋ ಎಂದಾಕ್ಷಣ ನಮಗೆಲ್ಲ ಶಂಕರ್ ನಾಗ್ ಅವರು ನೆನಪಾಗುತ್ತಾರೆ . ಅವರಿಗೆ ರಾಜ್ಯದ ವಿಕಾಸನವೇ ಕನಸಾಗಿತ್ತು ." ಎಂದಿದ್ದರು . ಇದೀಗ ಪಕ್ಷದ ಪ್ರಣಾಳಿಕೆಯನ್ನು ತಮ್ಮ ಮುಂದೆ ತಂದಿಟ್ಟಿದ್ದಾರೆ .
Upendra has announced his official political entry and it's been months already . Here Upendra has come to you with complete manifesto in this video